Saturday, February 4, 2012

ಉಸ್ಸಪ್ಪ


ಅಂತೂ ಪಾರಾಗಿಬಿಟ್ರಲ್ಲ ಚಿದಂಬರಂ ನಿಮ್ಮ 'ಪಿ' ಪವರ್ ಸಕತ್ ಇದೆ ಅಂತ ಈಗ ಎಲ್ಲರಿಗೂ ಗೊತ್ತಾಯಿತು ಬಿಡಿ.

ನದಿ ಮೇಲೆ ನಾಟಕ









ಹೇಮಾವತಿ ನದಿ ಮೇಲೆ ವೇದಿಕೆ ನಿರ್ಮಿಸಿ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ಹಾಸನದ ಗೊರೂರಿನ ಯುವಕರ ಕ್ರಿಯಾಶೀಲತೆ ನಿಜಕ್ಕೂ ಸೂಜಿಗಲ್ಲಿನಂತೆ ಸೆಳೆಯಿತು

ಎಂಥ ಅಧಿಕಾರಿ


ಈ ಕಾಡಿನಲ್ಲಿ ಪ್ರಾಣಿಗಳೇ ಇಲ್ಲ ಅಂತ ಅರಣ್ಯ ಇಲಾಖೆ ಅದಿಕಾರಿ ಮಹಾಷ್ಯರೋಬರು ಪರಿಸರ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಸಕಲೇಶಪುರದ ಕಾಗಿನೆರೆ ಮತ್ತು ಎಡಕುಮುರಿ ಕಾಯ್ದಿಟ್ಟ ಅರಣ್ಯ ಪ್ರದೇಶ.

Sunday, July 10, 2011

ಇದು ಸರಿನಾ ಸರ್ ?





























ತಾನು ಎಷ್ಟೆ ಪ್ರಾಮಾಣಿಕನಾಗಿದ್ದರೂ ಕಳ್ಳರಿಗೆ ರಕ್ಷಣೆ ನೀಡಿದರೆ ಅವರನ್ನು ಸತ್ಯಹರಿಶ್ಚಂದ್ರ ಎಂದು ಕರೆಯಲಾಗದು. ಈಗ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಭ್ರಷ್ಟರೇ ತುಂಬಿ ತುಳುಕುತ್ತಿರುವ ಈ ಕಾಲದಲ್ಲಿ ಮನಮೋಹನ್ ಸಿಂಗ್‌ರವರಂತಹ ಪ್ರಾಮಾಣಿಕರು ಇರುವುದು ಹೆಮ್ಮೆಯ ವಿಚಾರ ಅಂತ ಎಲ್ಲಾ ಕೊಂಡಾಡುತ್ತಾರೆ.
ತಾವೇ ನಾಯಕರಾಗಿ ಕುಳಿತಿರುವ ಮನೆಯೊಳಕ್ಕೆ ಕಳ್ಳಕಾಕರು ಬಂದು ದೋಚಿಕೊಂಡು ಹೋಗುವುದನ್ನು ನೋಡ್ತಾ ಸುಮ್ಮನೇ ಕುಳಿತರೇ ಅವರನ್ನು ಸಮರ್ಥ ನಾಯಕ ಎಂದು ಕರೆಯಲಾಗುತ್ತದೆಯಾ. ಖಂಡಿತಾ ಸಾಧ್ಯವಿಲ್ಲ. ಕದಿಯುವುದು ಬೇಡ ಬೇಡ ಎಂದರು ಕಳ್ಳರು ನನ್ನ ಮಾತಿಗೆ ಬೆಲೆಯನ್ನೇ ಕೊಡಲಿಲ್ಲ. ಪರಿಪರಿಯಾಗಿ ಕೇಳಿಕೊಂಡರೂ ಎಲ್ಲವನ್ನೂ ದೋಚಿಕೊಂಡು ಹೋದರು ಎಂದು ಹೇಳುವಂತಹ ಅಸಹಾಯಕ ಸ್ಥಿತಿ ನಮ್ಮ ಪ್ರಧಾನಮಂತ್ರಿಯವರದ್ದಾಗಿದೆ.
ಅದೂ ಒಂದು ಎರಡು ಕೋಟಿಯ ಅವ್ಯವಹಾರವೇ? ಸುಮಾರು ೧ ಲಕ್ಷದ ೭೬ ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ವಂಚಿಸಿದರೆ ಅದು ತಮಾಷೆಯ ವಿಷಯವೇ? ಒಂದೆರಡು ದಿನದಲ್ಲಿ ಇಷ್ಟು ಮೊತ್ತದ ಅವ್ಯವಹಾರ ಮಾಡಲು ಎಂತಾ ಖತರ್‌ನಾಕ್ ಕಿಲಾಡಿಗಳಿಗೂ ಸಾಧ್ಯವಾಗಲ್ಲ. ಸುಳಿವು ಸಿಕ್ಕಾಗಲೇ ಎ ರಾಜಾ, ದಯಾನಿಧಿ ಮಾರನ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರೆ ಅವರಿಂದ ಇದು ಸಾಧ್ಯವಾಗುತ್ತಿತ್ತೆ. ನಮ್ಮ ದೇಶದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಬಹುದಿತ್ತು. ಆದರೆ, ಹಾಗೆ ಮಾಡಲೇ ಇಲ್ಲ. ಹೀಗಾದರೆ ಇವರು ಸಮರ್ಥ ನಾಯಕ, ಪ್ರಾಮಾಣಿಕ ಎಂದು ಕರೆಸಿಕೊಳ್ಳಲು ಅರ್ಹರೇ ಎಂಬ ಪ್ರಶ್ನೆ ಅಮಾಯಕರನ್ನೂ ಕಾಡದಿರದು.
ಇನ್ನೊಂದು ಆಶ್ಚರ್ಯಕರ ವಿಷಯ ಎಂದರೆ, ಈ ಕಳ್ಳರು ಕಳ್ಳತನಕ್ಕೆ ಹೊಂಚು ಹಾಕಿದ ಗುಮಾನಿ ನಮ್ಮ ಪ್ರಧಾನಿಯವರಿಗೆ ಗೊತ್ತಿತ್ತಂತೆ. ಹಾಗಾರೆ ಸರ್ವಶಸ್ತ್ರಧಾರಿಯಾಗಿದ್ದ ನಿಮಗೆ ಅದನ್ನು ಬೇಧಿಸಲು ಏಕೆ ಸಾಧ್ಯವಾಗಲಿಲ್ಲ. ನಿಶಸ್ತ್ರಧಾರಿಯಂತೆ ವರ್ತಿಸಿದ್ದಾದರೂ ಏಕೆ? ಇದು ನಿಮ್ಮ ಹೊಣೆಯಾಗಿರಲಿಲ್ಲವೇ. ಇದನ್ನು ತಪ್ಪಿಸಿದ್ದರೆ ನಿಮಗೆ ಇನ್ನಷ್ಟು ಹೆಸರು ಬರುತ್ತಿರಲಿಲ್ಲವೇ? ಸರ್ಕಾರಕ್ಕಾದ ನಷ್ಟವನ್ನು ತಪ್ಪಿಸಬಹುದಿತ್ತಲ್ಲವೇ? ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣದ ಸರದಾರ ಎಂಬ ಬಿರುದು ಪಡೆಯುವುದು ನಿಮಗೆ ಬೇಕಿತ್ತೆ?
ನಿಮ್ಮ ಬಾಲ್ಯದಿಂದಲೂ ಸಂಪಾದಿಸಿಕೊಂಡು ಬಂದಿದ್ದ ಬುದ್ಧಿಮತ್ಯೆ, ಕೌಶಲ್ಯ ಎಲ್ಲವೂ ಈ ವಿಚಾರದಲ್ಲಿ ಉಪಯೋಗಕ್ಕೆ ಬಾರದಾಯಿತು. ತಪ್ಪನ್ನ ಬೇರೆ ಯಾರೇ ಮಾಡಿದ್ರೂ ನಿಮ್ಮ ಪ್ರಾಮಾಣಿಕತೆಯನ್ನ ಎಲ್ಲರೂ ಪ್ರಶ್ನಿಸುವಂತಾಯಿತು. ಅವರಿವರ ಕಡೆ ಕೈ ತೋರಿಸುವುದನ್ನು ಬಿಟ್ಟು ತಮಗಿರುವ ಅಧಿಕಾರವನ್ನು ಚಲಾಯಿಸಿ ನೆರೆಯ ರಾಷ್ಟ್ರಗಳಿಗೆ ಮಾದರಿಯಾದರೆ ಮಾತ್ರ ನಿಮ್ಮ ಮೇಲಿರುವ ಹೆಗ್ಗಳಿಕೆಗಳೆಲ್ಲ ಹಾಗೇ ಉಳಿದುಕೊಳ್ಳಲಿವೆ. ಇಲ್ಲದಿದ್ದರೇ ನೀವೂ ಸಹ ೧೦ ರಲ್ಲಿ ಹನ್ನೊಂದನೆಯವರಾಗುವುದರಲ್ಲಿ ಸಂಶಯವಿಲ್ಲ.

Saturday, July 9, 2011

WHO IS NEXT LOKAYUKTA ?





ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ನಿವೃತ್ತರಾದ ನಂತರ ಮುಂದಿನ ಲೋಕಾಯುಕ್ತರು ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದ, ಶಾಸಕ ಸಚಿವರ ವಿರುದ್ಧ ಛಾಟಿ ಬೀಸಿದ್ದ ಸಂತೋಷ್‌ ಹೆಗ್ಡೆ ಆಗಸ್ಟ್‌ ಮೊದಲ ವಾರ ತಮ್ಮ ಸ್ಥಾನ ತೆರವುಗೊಳಿಸಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಮತ್ತೊಬ್ಬ ದಕ್ಷ ನ್ಯಾಯಮೂರ್ತಿಯನ್ನು ನೇಮಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ.


ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿಯವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕೆಂಬ ನಿಯಮ ಲೋಕಾಯುಕ್ತ ಕಾಯಿದೆಯಲ್ಲಿ ಉಲ್ಲೇಖವಾಗಿದೆ. ಅದರಲ್ಲೂ ಕನ್ನಡಿಗರನ್ನೆ ಆ ಸ್ಥಾನಕ್ಕೆ ಕೂರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ನೂತನ ಲೋಕಾಯುಕ್ತ ಸ್ಥಾನಕ್ಕೆ ಮೂವರ ಹೆಸರುಗಳು ಕೇಳಿ ಬಂದಿವೆ. ಶಿವರಾಜ್‌ ಪಾಟೀಲ್‌, ಬನ್ನೂರ್ ಮಠ್‌ ಮತ್ತು ರವಿಂದ್ರನ್ ಅವರ ಹೆಸರು ಚಾಲ್ತಿಯಲ್ಲಿದೆ. ಶಿವರಾಜ್‌ ಪಾಟೀಲ್‌ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರೆ, ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬನ್ನೂರ್ ಮಠ್ ನಿವೃತ್ತರಾಗಿದ್ದಾರೆ. ರವಿಂದ್ರನ್ ಮುಂದಿನ ಅಕ್ಟೋಬರ್ ನಲ್ಲಿ ನಿವೃತ್ತರಾಗಲಿದ್ದಾರೆ.

ಶಿವರಾಜ್‌ ಪಾಟೀಲ್‌ ಅಥವಾ ಬನ್ನೂರ್ ಮಠ್ ಅವರಲ್ಲಿ ಯಾರಾದರು ಒಬ್ಬರನ್ನು ನೇಮಕ ಮಾಡುವುದಾದರೆ ನೂತನ ಲೋಕಾಯುಕ್ತರ ಸ್ಥಾನ ಶೀಘ್ರದಲ್ಲೆ ಭರ್ತಿಯಾಗಲಿದೆ. ಒಂದು ವೇಳೆ ಇವರಿಬ್ಬರನ್ನು ಹೊರತುಪಡಿಸಿ ರವಿಂದ್ರನ್‌ ಅವರನ್ನೇ ಆಯ್ಕೆ ಮಾಡಬೇಕು ಎಂಬ ನಿಲುವನ್ನು ಸರ್ಕಾರ ತಾಳಿದರೆ 2 ತಿಂಗಳು ಉಪಲೋಕಾಯುಕ್ತರೇ ಲೋಕಾಯುಕ್ತರ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ಲೋಕಾಯುಕ್ತರ ಆಯ್ಕೆಯಲ್ಲಿ ವಿಳಂಬ ಮಾಡೋದಿಲ್ಲ ಅನ್ನೋದು ಸರ್ಕಾರದ ವಾದ.

ಭೂಹಗರಣದ ಭೂತ ಮುಖ್ಯಮಂತ್ರಿಗಳ ನೆತ್ತಿಯಮೇಲೆ ನೇತಾಡುತ್ತಿದೆ. ಹೀಗಾಗಿ ಲಿಂಗಾಯಿತ ಸಮುದಾಯಕ್ಕೆ ಸೇರಿದ ಶಿವರಾಜ್‌ ಪಾಟೀಲ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ತೀರ ಕಡಿಮೆ ಎನ್ನಲಾಗುತ್ತಿದೆ. ಲೋಕಾಯುಕ್ತರ ಆಯ್ಕೆಯಲ್ಲಿ ಜನರಿಗೆ ತಪ್ಪು ಸಂದೇಶ ರವಾನೆಯಾಗದಂತೆ ಮುಖ್ಯಮಂತ್ರಿಗಳು ಜಾಣತನ ಪ್ರದರ್ಶಿಸಬೇಕಾಗುತ್ತೆ. ಹೀಗಾಗಿ ರವಿಂದ್ರನ್‌ ಅವರೇ ಮುಂದಿನ ಲೋಕಾಯುಕ್ತರಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಯಾರೇ ಆ ಸ್ಥಾನ ವಹಿಸಿಕೊಂಡರೂ ಭ್ರಸ್ಟಾಚಾರಕ್ಕೆ ಕಡಿವಾಣ ಹಾಕಲಿ ಎನ್ನುವುದು ಸಾರ್ವಜನಿಕರ ಆಶಯ.

Tuesday, May 31, 2011

ಕೈ ಕೊಟ್ಟ ಗೇಲ್



ಐಪಿಎಲ್ ಸೀಸನ್ ಫೋರ್ ಆವೃತ್ತಿಯ ಮೊದಲಾರ್ಧದಲ್ಲಿ ವಿಜಯ್ ಮಲ್ಯ ಮಾಡಿದ ತಪ್ಪಿಗೆ ತಕ್ಕ ಶಾಸ್ತಿಯನ್ನೆ ಮಾಡಿಸಿಕೊಂಡಿದ್ದರು. ಕನ್ನಡಿಗರನ್ನೆಲ್ಲ ಬಿಟ್ಟು ಟೀಂ ಕಟ್ಟಿ ಹೀನಾಯ ಸೋಲು ಅನುಭವಿಸಿದ್ರು. ಕೊನೆ ಕ್ಷಣದಲ್ಲಿ ನ್ಯಾನ್ಸ್ ಪಂದ್ಯದಿಂದ ಹೊರಗುಳಿದಿದ್ದರಿಂದ ಅವರ ಬದಲಿಗೆ ವಿಂಡೀಸ್ ದೈತ್ಯ ದಾಂಡಿಗ ಕ್ರಿಸ್ ಗೇಲ್ ಅವರನ್ನು ಕರೆದು ತಂದರು. ಗೇಲ್ ಸಹ ಆಡಿದ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಆರ್‌ಸಿಬಿ ಲೀಗ್ ಪಂದ್ಯಗಳ ಪಟ್ಟಿಯಲ್ಲಿ ಅಗ್ರಪಟ್ಟಕ್ಕೇರಿತ್ತು. ಪ್ಲೇ ಆಫ್ ಪಂದ್ಯದಲ್ಲಿ ಸಚಿನ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಫೈನಲ್‌ಗೂ ಲಗ್ಗೆ ಇಟ್ಟಿತು.
ಫೈನಲ್ ಪಂದ್ಯದಲ್ಲಿ ತಂತ್ರಗಾರಿಕೆಯ ಮಾಂತ್ರಿಕ ಮಹೇಂದ್ರ ಸಿಂಗ್ ಧೋನಿ ತಂಡವೇ ಎದುರಾಯಿತು. ಆದರೆ ಭಾರೀ ಭರವಸೆ ಮೂಡಿಸಿದ್ದ ಕ್ರಿಸ್ ಗೇಲ್ ಒಬ್ಬರನ್ನು ಔಟ್ ಮಾಡಿದರೆ ನಾವು ಗೆದ್ದ ಹಾಗೆಯೇ ಎಂದು ಎಣಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಓವರ್‌ನಲ್ಲೇ ಗೇಲ್‌ರನ್ನು ಪೆವಿಲಿಯನ್‌ಗೆ ಕಳಿಸಿತು. ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್‌ಕೆ ಆಟಗಾರರು ಗೇಲ್ ಔಟ್ ಆಗುತ್ತಿದ್ದಂತೆ ಕುಣಿದು ಕುಪ್ಪಳಿಸಿದರು. ಧೋನಿ ಹೂಡಿದ ಚಕ್ರವ್ಯೂಹದಲ್ಲಿ ಸಿಲುಕಿದ ಆರ್‌ಸಿಬಿ ಆಟಗಾರರು ಸೋತು ಸುಣ್ಣವಾದ್ರು. ೨೦೬ ರನ್ ಗುರಿ ನೀಡಿದ್ದ ಸಿಎಸ್‌ಕೆ ೧೪೦ ರನ್‌ಗೆ ಆರ್‌ಸಿಬಿ ತಂಡವನ್ನು ಆಲ್ ಔಟ್ ಮಾಡಿತು. ಗೇಲ್ ಮೇಲೆ ನಂಬಿಕೆ ಇಟ್ಟು ಬೀಗುತ್ತಿದ್ದ ಮಲ್ಯ, ಎರಡನೇ ಬಾರಿ ಫೈನಲ್‌ಗೆ ಹೋದರೂ ಪಂದ್ಯ ಗೆಲ್ಲಲಾರದೆ ಹ್ಯಾಪು ಮೋರೆ ಹಾಕಿಕೊಂಡು ಬೆಂಗಳೂರಿಗೆ ವಾಪಸ್ ಆದ್ರು. ಈಗಲಾದ್ರೂ ಮಲ್ಯ ಸಾಹೇಬ್ರು ಕನ್ನಡಿಗ ಆಟಗಾರರನ್ನು ನಿರ್ಲಕ್ಷ್ಯ ಮಾಡದಿರಲಿ.

Thursday, May 5, 2011

ಲಾಡೆನ್ ಮಟಾಶ್

ದಿ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಒಸಾಮ ಬಿನ್ ಲಾಡೆನ್‌ನ ಅವಸಾನವಾಗಿದೆ. ೧೦ ವರ್ಷಗಳಿಂದ ನರಹಂತಕನಾಗಿದ್ದ ಪಾತಕಿಯನ್ನು ವೀರ ಯೋಧರು ತುಪಾಕಿಯಲ್ಲಿ ಸುಟ್ಟಿದ್ದಾರೆ. ಈ ಮೂಲಕ ಅಮೆರಿಕಾದ ಸೀಳ್ ಕಮಾಂಡೋ ಪಡೆ ಟ್ವಿನ್ ಟವರ್ ಕಟ್ಟಡ ದುರಂತದಲ್ಲಿ ಸಾವಿಗೀಡಾದ ಮೂರು ಸಾವಿರ ನಾಗರಿಕರ ಸಾವಿಗೆ ಪ್ರತಿಕಾರ ತೀರಿಸಿಕೊಂಡಿದ್ದಾರೆ.
ಲಾಡೆನ್ ಮುಗಿಸಿದ್ದು ಅಮೆರಿಕಾಗೆ ಹೆಚ್ಚುಗಾರಿಕೆ ಅಲ್ಲ. ಕೇವಲ ಒಬ್ಬ ಭಯೋತ್ಪಾದಕನನ್ನು ಮುಗಿಸಲು ವಿಶ್ವದ ದೊಡ್ಡಣ್ಣನೇ ೧೦ ವರ್ಷ ತೆಗೆದುಕೊಂಡಿದೆ. ಆದರೆ, ನಾವು ನಿರ್ಧಾರ ತೆಗೆದುಕೊಂಡ ಮೂರೇ ತಿಂಗಳಲ್ಲಿ ಬೆನಜೀರ್ ಭುಟ್ಟೋಳನ್ನ ಹತ್ಯೆ ಮಾಡಿದೋ ಅಂತ ತಾಲಿಬಾನ್ ಉಗ್ರರು ಅಮೆರಿಕವನ್ನು ಕಿಚಾಯಿಸಿವೆ.
ಪಾತಕಿ ಪತನ ತಡವಾಗಲು ಕಾರಣವಿದೆ. ಆತನಿಗೆ ಆಶ್ರಯ ನೀಡಿದ್ದ ದೇಶ ಅಮೆರಿಕಾಗೆ ಸಹಕಾರ ನೀಡದುದೇ ಆತ ೧೦ ವರ್ಷ ಸೇಫ್ ಆಗಿರಲು ಸಾಧ್ಯವಾಯಿತು. ಲಾಡೆನ್ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ರೂ ಅವನಿಗೆ ಅಶ್ರಯ ನೀಡಿರಲಿಲ್ಲ ಅಂತ ಪಾಕಿಸ್ತಾನ ಈಗಲೂ ಮೊಂಡುವಾದ ಮಂಡಿಸುತ್ತಿದೆ. ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಅನ್ನೋದು ಈಗ ಸ್ಪಷ್ಟವಾಗಿದೆ. ಹಾಗಾಗಿ ಆ ದೇಶವನ್ನು ಅಂತರಾಷ್ಟ್ರೀಯ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕಿದೆ. ಆಗಲಾದರೂ ನ್ಯಾಯಾಲಯದ ಛೀಮಾರಿಯಿಂದ ಪಾಕಿಸ್ತಾನ ಬುದ್ಧಿ ಕಲಿಯಬಹುದು.
ವಿಶ್ವದ ಯಾವುದೇ ಮೂಲೆಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆದರೂ ಅದರ ಮೂಲ ಬೇರು ಪಾಕಿಸ್ತಾನವೇ ಆಗಿರುತ್ತದೆ. ಲಾಡೆನ್‌ಗಾಗಿ ಆಪರೇಷನ್ ನಡೆಸಿದಂತೆ ಇಡೀ ಪಾಕ್ ನೆಲವನ್ನು ಶೋಧಿಸಿದರೆ ಇನ್ನೆಷ್ಟು ಪಾತಕಿಗಳು ಹೊರಬರುತ್ತಾರೋ ಗೊತ್ತಿಲ್ಲ. ಅಮೆರಿಕ ಮಾತ್ರವಲ್ಲದೇ ಎಲ್ಲಾ ದೇಶಗಳು ಒಂದು ನಿರ್ಧಾರ ತೆಗೆದುಕೊಂಡು ಆ ಕೆಲಸ ಮಾಡಿದರೆ ಇಡೀ ವಿಶ್ವದಲ್ಲಿ ಶಾಂತಿ ನೆಲೆಸುತ್ತೆ.